ಜ್ಞಾನವನ್ನು ಸಾಧ್ಯವಾದ ಮಟ್ಟಿಗೆ ಧಾಕಲು ಮಾಡಿ

ಜನರು ಮೆಚ್ಚಿದ ಬರಹಗಳು ಬಹಳಕಾಲ ಚಾಲತಿಯಲ್ಲಿ ಮತ್ತು ಜನಗಳ ಮನಸ್ಸಿನಲ್ಲಿ ಉಳಿಯುತ್ತದೆ. ಈಗಿನ ಯಾರು ಈನಿನ್ನ ಪತ್ರಿಕೆಯನ್ನು ಓದುತ್ತಾರೆ? ಎಂದು ಹಲವು ಮಂದಿ ನನ್ನನು ಕೇಳಿರುವುದುಂಟು. ಆದರೆ ನನ್ನ ತಿಳುವಳಿಕೆಯಲ್ಲಿ ಹೇಳುವುದಾದರೆ ಸಾಹಿತ್ಯವು ಧಾಖಲಾಗಬೇಕು! ವಿಷಯಗಳನ್ನು ಕಲೆಹಾಕುವ, ಧಾಕಲು ಮಾಡುವ ಒಂದು ಮಾರ್ಗವೆಂದರೆ ಅದು ಬರಹದ ಮೂಲಕ. ಅದು ತಾಳೆಯ ಗರಿಯ ಮೇಲಿರಬಹುದು, ಕಲ್ಲಿನ ಶಾಸನದ ಮೇಲಿರಬಹುದು, ಬಿಳಿಯ ಹಾಳೆಯ ಮೇಲಿರಬಹುದು, e -page ಮೂಲಕ ಇರಬಹುದು. ಒಟ್ಟಿನಲ್ಲಿ ಜನರು ಕಾಲಕಾಲಕ್ಕೆ ನಡೆಸುದ್ದ ಬದುಕಿನ ವಿಚಾರಗಳನ್ನು, ಕಾಲವನ್ನು, ವಿಶೇಷತೆಗಳನ್ನು, ಭಾಷೆಯನ್ನು ಹಾಗು ಜ್ಞಾನವನ್ನು ಸಾಧ್ಯವಾದ ಮಟ್ಟಿಗೆ ಧಾಕಲು ಮಾಡಿ ಕಾಪಾಡಬೇಕು ಎನ್ನುವುದು ನನ್ನ ಕರ್ತವ್ಯವೆಂದು ಭಾವಿಸೆದ್ದೇನೆ.